ಸಕಲಕೆಲ್ಲಕೆ ನೀನೆ ಅಕಳಂಕ ಗುರು
ಸಕಲಕೆಲ್ಲಕೆ ನೀನೆ ಅಕಳಂಕ ಗುರುವೆಂದು
ನಿಖಿಳ ಶಾಸ್ತ್ರವು ಪೇಳುತಿರಲರಿದೆನು|

ಅವರವರ ದರುಶನಕೆ ಅವರವರ ವೇಷದಲಿ
ಅವರವರಿಗೆಲ್ಲ ಗುರು ನೀನೊಬ್ಬನೇ|

ಅವರವರ ಭಾವಕ್ಕೆ ಅವರವರ ಅರ್ಚನೆಗೆ
ಅವರವರಿಗೆಲ್ಲ ದೇವ ನೀನೊಬ್ಬನೇ |

"ಹೋರಾಟವಿಕ್ಕಿಸಲು ಬೇರಾದೆಯಲ್ಲದೆಯೆ
ಬೇರುಂಟೆ ಜಗದೊಳಗೆ ಎಲೆ ದೇವನೇ |

ಆರೂ ಅರಿಯರು ನೀನು ಬೇರಾದ ಪರಿಗಳನು
ಮಾರಾರಿ ಶಿವ ಷಡಕ್ಷರಲಿಂಗವೆ"!.||ಸುಬೋಧಸಾರ- ಮುಪ್ಪಿನ ಷಡಕ್ಷರಿ
ಸಾಹಿತ್ಯ: ಮುಪ್ಪಿನ ಷಡಕ್ಷರಿ

ನೋಡಿ
ತಾತ್ವಿಕ ಸಾಹಿತ್ಯ
ಪರಿವಿಡಿ

ಉಲ್ಲೇಖ
ವರ್ಗ:ತಾತ್ವಿಕ ಸಾಹಿತ್ಯವರ್ಗ:ಕನ್ನಡ ಸಾಹಿತ್ಯ